

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶ್ರೀಮತಿ ಶ್ವೇತ ಎಸ್. ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ* ಮಾರ್ಗದರ್ಶನ ಮಾಡಿದವರು ಸಹ ಪ್ರಾಧ್ಯಾಪಕಿ ಡಾ.ಹಾಲಮ್ಮ
*ಶ್ರೀಮತಿ ಶ್ವೇತ ಎಸ್. ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ* ಮಾರ್ಗದರ್ಶನ ಮಾಡಿದವರು ಸಹ ಪ್ರಾಧ್ಯಾಪಕಿ ಡಾ.ಹಾಲಮ್ಮ ಶಿವಮೊಗ್ಗ ನಿವಾಸಿ ಶ್ರೀಮತಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ. ಅವರ ಮಾರ್ಗದರ್ಶನದಲ್ಲಿ “ಎಸ್.ವಿ. ಪರಮೇಶ್ವರ ಭಟ್ಟರ ಸೃಜನಶೀಲ ಸಾಹಿತ್ಯ: ವಿಭಿನ್ನ ನೆಲೆಗಳು” ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ. ಇವರು ಶಿವಮೊಗ್ಗ ನಿವಾಸಿ, ಭದ್ರ ಮೇಲ್ದಂಡೆ ಯೋಜನೆ, ಬಿ.ಆರ್. ಪ್ರಾಜೆಕ್ಟ್ನಲ್ಲಿ…
ಶೋಭಾ ಮಳವಳ್ಳಿ ಟಿಪ್ಪಣಿ; ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು*
*ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು* ಪಲ್ಲವಿ, ಓದಿನಲ್ಲಿ, ಕೆಲಸದಲ್ಲಿ, ಕುಟುಂಬದಲ್ಲಿಯೂ ಜಾಣೆ. ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡರೂ, ಧೈರ್ಯಗೆಡದೆ ಮಗನನ್ನು ರಕ್ಷಿಸಿ, ಮನೋಬಲದಿಂದ ಎದುರಿಸಿದ್ದಾರೆ. ಆಕೆ ಓದಿನಲ್ಲಿ ಸದಾ ಮುಂದು, ಜಾಣೆ, ಬುದ್ಧಿವಂತೆ, ಧೈರ್ಯವಂತೆ. ಡಿಗ್ರಿ ಮುಗಿಸಿ, 2006ರಲ್ಲಿ ಮಂಜುನಾಥ್ ಜತೆ ಮದುವೆ. ಆಮೇಲೆಲ್ಲ ಗಂಡ, ಮಗ, ಮನೆ, ಕುಟುಂಬದ ಪಾಲನೆ. ಮಗ ಬೆಳೆಯುತ್ತಿದ್ದಂತೆ ಮತ್ತೆ ದುಡಿಯುವ ಹಂಬಲ. ಕಳೆದ 7-8 ವರ್ಷಗಳಿಂದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದಲ್ಲಿ ಉದ್ಯೋಗ. ಸದ್ಯ ಬಿರೂರಿನ…
ಶಿವಮೊಗ್ಗ ಕಂದಾಯ ವಿಭಾಗದಲ್ಲಿ ದಿಢೀರ್ ಬದಲಾವಣೆಯ ಹಂಗಾಮ…* *ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಆದಾಯದ ಬುಡಕ್ಕೆ ಬಿತ್ತು ಕೊಡಲಿ ಪೆಟ್ಟು!* *ಇಲ್ಲಿದೆ ಬದಲಾವಣೆಯ ಪಟ್ಟಿ!*
*ಶಿವಮೊಗ್ಗ ಕಂದಾಯ ವಿಭಾಗದಲ್ಲಿ ದಿಢೀರ್ ಬದಲಾವಣೆಯ ಹಂಗಾಮ…* *ಕೆಲ ಡಾಟಾ ಎಂಟ್ರಿ ಆಪರೇಟರ್ ಗಳ ಆದಾಯದ ಬುಡಕ್ಕೆ ಬಿತ್ತು ಕೊಡಲಿ ಪೆಟ್ಟು!* *ಇಲ್ಲಿದೆ ಬದಲಾವಣೆಯ ಪಟ್ಟಿ!* ಶಿವಮೊಗ್ಗ ಮಹಾನಗರ ಪಾಲಿಕೆ ಕಂದಾಯ ವಿಭಾಗದ ವಲಯ ಕಚೇರಿಗಳಿಗೆ ಪರಿಷ್ಕೃತ ಅಧಿಕೃತ ಜ್ಞಾಪನಾ ಪತ್ರವನ್ನು ಏಪ್ರಿಲ್ 28ರಂದು ಉಪ ಲೋಕಾಯುಕ್ತ(ಆಡಳಿತ) ತುಷಾರ್ ಹೊರಡಿಸಿದ್ದು, ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಉಪ ಆಯುಕ್ತ( ಆಡಳಿತ) ಕಚೇರಿ ಸೇರಿದಂತೆ ಮೂರು ವಲಯಗಳಲ್ಲೂ ಬದಲಾವಣೆ ಆದೇಶ ಹೊರಡಿಸಿರುವ ತುಷಾರ್ ರವರು ಮೆರೆಯುತ್ತಿದ್ದ ಕೆಲ ಡಾಟಾ ಎಂಟ್ರಿ…
ಮುನಿರತ್ನ ವಿರುದ್ಧದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ:* *ಅಶ್ಲೀಲ ಫೋಟೊ, ವಿಡಿಯೋ ಮಾಡಿದ್ದು ಬಹಿರಂಗ*
*ಮುನಿರತ್ನ ವಿರುದ್ಧದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ:* *ಅಶ್ಲೀಲ ಫೋಟೊ, ವಿಡಿಯೋ ಮಾಡಿದ್ದು ಬಹಿರಂಗ* ಆರ್ಆರ್ ನಗರ ಶಾಸಕ ಮುನಿರತ್ನ (Munirathna) ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು (CID Officials) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ (Chargesheet) ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಶಾಸಕ ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಒಟ್ಟು 3 ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ಮುನಿರತ್ನ, ಸುಧಾಕರ್, ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ, ಲೋಹಿತ್…
ಪ್ರತಿ ಮನೆ ಭೇಟಿ ನೀಡಿ ನಿಗದಿತ ವೇಳೆಯೊಳಗೆ ಒಳಮೀಸಲಾತಿ ಸಮೀಕ್ಷೆ ಪೂರ್ಣಗೊಳಿಸಿ : ಡಿಸಿ*
*ಪ್ರತಿ ಮನೆ ಭೇಟಿ ನೀಡಿ ನಿಗದಿತ ವೇಳೆಯೊಳಗೆ ಒಳಮೀಸಲಾತಿ ಸಮೀಕ್ಷೆ ಪೂರ್ಣಗೊಳಿಸಿ : ಡಿಸಿ* ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತಾದ ಸಮೀಕ್ಷೆಯು ಸರ್ಕಾರದ ಆದ್ಯತೆಯ ಸಮೀಕ್ಷೆಯಾಗಿದ್ದು ಸಮೀಕ್ಷೆದಾರರು ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿ ಮನೆ ಮನೆಗೆ ತೆರಳಿ ಕೈಗೊಂಡು ನಿಗದಿತ ವೇಳೆಯೊಳಗೆ ಈ ಸಮೀಕ್ಷೆಯನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿ.ಪಂ ಸಭಾಂಗಣದಲ್ಲಿ ನ್ಯಾಯಮೂರ್ತಿ ಹೆಚ್ ಎನ್…
ಪಹಲ್ಗಾಮ್ ದಾಳಿ:* *ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ*
*ಪಹಲ್ಗಾಮ್ ದಾಳಿ:* *ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ* ಪಹಲ್ಗಾಮ್ ಉಗ್ರರ ದಾಳಿ (pahalgam terror attack) ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪಾಕಿಸ್ತಾನ ಮಾಧ್ಯಮಗಳಲ್ಲೂ (Pakistan Media) ಸುದ್ದಿಯಾಗಿದ್ದಾರೆ. ಪಾಕಿಸ್ತಾನದ (Pakistan) ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಇದನ್ನು ಅತ್ತ ಪಾಕಿಸ್ತಾನ ಮೀಡಯಾಗಳು ಸುದ್ದಿ ಪ್ರಸಾರ ಮಾಡಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಏಪ್ರಿಲ್ 26ರಂದು…
ಶಿವಮೊಗ್ಗದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ; ಎಲ್ಲಿ? ಯಾವಾಗ?*
*ಶಿವಮೊಗ್ಗದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ; ಎಲ್ಲಿ? ಯಾವಾಗ?* ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ. ಬೆಂಗಳೂರಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಘವೇಂದ್ರ, ಶಿವಮೊಗ್ಗ…
ಚಂಡ ಮಾರುತ- ತರಲಿದೆ ಶಿವಮೊಗ್ಗದಲ್ಲೂ ಇವತ್ತಿಂದ ಮಳೆ*
*ಚಂಡ ಮಾರುತ- ತರಲಿದೆ ಶಿವಮೊಗ್ಗದಲ್ಲೂ ಇವತ್ತಿಂದ ಮಳೆ* ಚಂಡಮಾರುತ ಪರಿಣಾಮ ಇಂದಿನಿಂದ ಕರ್ನಾಟಕದಾದ್ಯಂತ ಮಳೆ(Rain)ಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಮಳೆಯ ಮುನ್ಸೂಚನೆ ನೀಡಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ರಬಕವಿ, ಸಿಂಧನೂರು, ಚಿಂಚೋಳಿ,…