ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಇಂದು ರಾತ್ರಿಯಿಂದ ಬೆಳಿಗ್ಗೆವರೆಗೆ ಕಾಂಗ್ರೆಸ್ಸಿನ ಹೆಚ್.ಸಿ.ಯೋಗೇಶರ ಕಿಸ್ ಮಸ್ ಹಬ್ಬದ ಕೇಕು ಯಾತ್ರೆ*
*ಇಂದು ರಾತ್ರಿಯಿಂದ ಬೆಳಿಗ್ಗೆವರೆಗೆ* *ಕಾಂಗ್ರೆಸ್ಸಿನ ಹೆಚ್.ಸಿ.ಯೋಗೇಶರ ಕಿಸ್ ಮಸ್ ಹಬ್ಬದ ಕೇಕು ಯಾತ್ರೆ* ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್ ವಿಶೇಷ ರೀತಿಯಲ್ಲಿ ಕ್ರಿಸ್ತ ಬಂಧುಗಳೊಂದಿಗೆ ಈ ಬಾರಿ ಕ್ರಿಸ್ ಮಸ್ ಆಚರಿಸುತ್ತಿದ್ದಾರೆ. ಶಿವಮೊಗ್ಗ ನಗರದ ಆರು ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರೊಂದಿಗೆ 5 ಸಾವಿರ ಕೇಕ್ ಗಳನ್ನು ವಿತರಿಸಲಿದ್ದು, ವಿಶೇಷ ರೀತಿಯಲ್ಲಿ ಕ್ರಿಸ್ ಮಸ್ ಆಚರಿಸುತ್ತಿದ್ದಾರೆ. ಡಿ.24ರ ಇಂದು ರಾತ್ರಿ 9ಕ್ಕೆ ಸಾಗರ ರಸ್ತೆಯಲ್ಲಿರುವ ಸೈಂಟ್ ಮೇರೀಸ್…
*ನಶೆಯಲ್ಲಿದ್ದವನ ಬರ್ಬರ ಕೊಲೆ;* *ದೇವಸ್ಥಾನದ ಎದುರೇ ಹರಿದ ನೆತ್ತರು*
*ನಶೆಯಲ್ಲಿದ್ದವನ ಬರ್ಬರ ಕೊಲೆ;* *ದೇವಸ್ಥಾನದ ಎದುರೇ ಹರಿದ ನೆತ್ತರು* ದೇಗುಲದ ಎದುರೇ ನೆತ್ತರು ಹರಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸಿಕಟ್ಚಿ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯೋರ್ವನನ್ನು ಆತನ ಸಹೋದರ ಮತ್ತು ಭಾವ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ಮತ್ತೆ ಯಾರದ್ದಾದರೂ ಪಾತ್ರ ಇದೆಯಾ ಎಂಬ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ. ಬಸಪ್ಪನ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ…
*ಎಲೆಚುಕ್ಕೆ ರೋಗ ನಿಯಂತ್ರಣ ಜಾಗೃತಿ-ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ : ಮಧು ಬಂಗಾರಪ್ಪ*
*ಎಲೆಚುಕ್ಕೆ ರೋಗ ನಿಯಂತ್ರಣ ಜಾಗೃತಿ-ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ : ಮಧು ಬಂಗಾರಪ್ಪ* ಶಿವಮೊಗ್ಗ, ಮಲೆನಾಡು ಪ್ರದೇಶದಲ್ಲಿ ತೀವ್ರತರವಾಗಿರುವ ಅಡಿಕೆ ಎಲೆಚುಕ್ಕೆ ರೋಗದಿಂದಾಗಿ ಸಣ್ಣ ರೈತರಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ವಿಜ್ಞಾನಿಗಳಿಂದ ಮಾರ್ಗದರ್ಶನ ಪಡೆದು ಹತೋಟಿ ಕ್ರಮ ಕೈಗೊಳ್ಳುತ್ತಿದ್ದು ರೈತರಿಗೆ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದು ಅತಿ ಅವಶ್ಯಕವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಲೆ…
*ಕೊಲೆ ಆರೋಪ ಕೋರ್ಟ್ನಲ್ಲಿ ಸಾಬೀತು;* *ಆದರೂ ಮಹಿಳೆ ಅಪರಾಧಮುಕ್ತ! -ಅಚ್ಚರಿಯ ತೀರ್ಪು*
*ಕೊಲೆ ಆರೋಪ ಕೋರ್ಟ್ನಲ್ಲಿ ಸಾಬೀತು;* *ಆದರೂ ಮಹಿಳೆ ಅಪರಾಧಮುಕ್ತ! -ಅಚ್ಚರಿಯ ತೀರ್ಪು* ಮಂಗಳೂರು ಜಿಲ್ಲಾ ನ್ಯಾಯಾಲಯದಿಂದ ಒಂದು ವಿಶೇಷ, ಅಚ್ಚರಿಯ ತೀರ್ಪು ಹೊರಬಿದ್ದಿದೆ. ಮಹಿಳೆಯೊಬ್ಬರು ಪತಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರೂ, ಆಕೆಯನ್ನು ಅಪರಾಧಮುಕ್ತಗೊಳಿಸಿ ತೀರ್ಪು ನೀಡಲಾಗಿದೆ. ಹಾಗಾದರೆ ಏನಿದು ಪ್ರಕರಣ? ಈ ತೀರ್ಪಿಗೆ ಕಾರಣವೇನು? ಅಚ್ಚರಿಯ ತೀರ್ಪು ನೀಡುವ ವೇಳೆ ನ್ಯಾಯಾಲಯ ಹೇಳಿದ್ದೇನು? ಎಲ್ಲ ವಿವರಗಳು ಇಲ್ಲಿವೆ. ಆಕೆ ಪತಿಯನ್ನೇ ಕೊಲೆ ಮಾಡಿದಾಕೆ. ಸಾಲದೆಂಬಂತೆ ನ್ಯಾಯಾಲಯದಲ್ಲೂ ಆರೋಪ ಸಾಬೀತಾಗಿದೆ. ಇಷ್ಟಾದರೂ ಆಕೆಗೆ ಕೋರ್ಟ್ ಶಿಕ್ಷೆ ವಿಧಿಸಿಲ್ಲ!…
*ಸುಗಮ ಪ್ರಯಾಣಕ್ಕೆ ನೂತನ ಆಟೋ ರಿಕ್ಷಾ ಪ್ರೀ-ಪೈಯ್ಡ್ ಕೌಂಟರ್ ಆರಂಭ : ಡಿಸಿ* ಜ.15 ರ ನಂತರ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಬಳಿ ಪ್ರಿ-ಪೈಯ್ಡ್ ಕೌಂಟರ್
*ಸುಗಮ ಪ್ರಯಾಣಕ್ಕೆ ನೂತನ ಆಟೋ ರಿಕ್ಷಾ ಪ್ರೀ-ಪೈಯ್ಡ್ ಕೌಂಟರ್ ಆರಂಭ : ಡಿಸಿ* ಜ.15 ರ ನಂತರ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಬಳಿ ಪ್ರಿ-ಪೈಯ್ಡ್ ಕೌಂಟರ್ ಶಿವಮೊಗ್ಗ ಪ್ರಯಾಣಿಕರ ಸುಗಮ ಪ್ರಯಾಣಕ್ಕಾಗಿ ನಗರದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ನೂತನವಾಗಿ ಆಟೋ ರಿಕ್ಷಾ ಪ್ರೀ ಪೈಯ್ಡ್ ಕೌಂಟರ್ಗಳನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಟೋ ರಿಕ್ಷಾ ಸಂಘಗಳು ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿದ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಯಾರು ಹೇಳುತ್ತಾರೆ ನಿನಗೆ ನನ್ನ ವಿಳಾಸ… ನಾನೋ ವಿಳಾಸವಿಲ್ಲದವನು! 2. ಇಲ್ಯಾರೂ ಖಾಲಿ ಇಲ್ಲ; ಪ್ರೇಮದಿಂದ ತುಂಬಿ ಹೋಗಿದ್ದಾರೆ ಕೆಲವರು, ಕೆಲವರು ದ್ವೇಷದಿಂದ, ಕೆಲವರಂತೂ ಖುಷಿಯಿಂದ ತುಂಬಿ ಹೋಗಿದ್ದರೆ, ಮತ್ತೆ ಕೆಲವರು ದುಃಖದಿಂದ… 3. ಜೊತೆಗಿದ್ದಾಗ ಹನಿಯಂತೆ ಕಾಣುವೆ ಕಳೆದುಕೊಳ್ಳುವ ಭಯವೋ ಸಮುದ್ರದಷ್ಟು! – *ಶಿ.ಜು.ಪಾಶ* 8050112067 (23/12/2025)
*ಖಾಸಗಿ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ* *ಶಿವಮೊಗ್ಗ ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್* *ಸಸ್ಪೆಂಡ್ ಅಥವಾ ಇಲಾಖಾ ಶಿಸ್ತುಕ್ರಮಕ್ಕೆ ಒಳಗಾಗಲಿದ್ದಾರಾ ನಾ.ಮಧುಗಿರಿ?*
*ಖಾಸಗಿ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ* *ಶಿವಮೊಗ್ಗ ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್* *ಸಸ್ಪೆಂಡ್ ಅಥವಾ ಇಲಾಖಾ ಶಿಸ್ತುಕ್ರಮಕ್ಕೆ ಒಳಗಾಗಲಿದ್ದಾರಾ ನಾ.ಮಧುಗಿರಿ?* ಶಿವಮೊಗ್ಗದ ಬಸ್ ನಿಲ್ದಾಣ ಎದುರಿನ ಖಾಸಗಿ ಹೋಟೆಲ್ ಕಾರ್ಮಿಕನ ಮೇಲೆ ತಡರಾತ್ರಿ ಹಲ್ಲೆ ಮಾಡಿದ್ದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಪ್ರಕರಣ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಸ್ವತಃ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್…
*ಪೋಲೀಸ್ ಅಧಿಕಾರಿಯಿಂದ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆಗೆ ಖಂಡನೆ – ಇಸ್ಪೀಟ್ ಅಡ್ಡೆಗಳಿಗೆ ಕಡಿವಾಣ ಹಾಕಲು ಯುವ ಕಾಂಗ್ರೆಸ್ ನಿಂದ ಅಗ್ರಹ*
*ಪೋಲೀಸ್ ಅಧಿಕಾರಿಯಿಂದ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆಗೆ ಖಂಡನೆ – ಇಸ್ಪೀಟ್ ಅಡ್ಡೆಗಳಿಗೆ ಕಡಿವಾಣ ಹಾಕಲು ಯುವ ಕಾಂಗ್ರೆಸ್ ನಿಂದ ಅಗ್ರಹ* *ಹೊರ ಊರುಗಳಿಂದ ಬಂದು, ತುತ್ತು ಅನ್ನಕ್ಕಾಗಿ ಹೋಟೆಲ್ಗಳಲ್ಲಿ ಕ್ಲೀನರ್ಗಳಾಗಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಮೊನ್ನೆ ರಾತ್ರಿ ಏಕಾಏಕಿ ಹಲ್ಲೆ ಮಾಡಿದ ದೊಡ್ಡಪೇಟೆ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿಯ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಸಮಯ ಮೀರಿ ಹೋಟೆಲ್ ವ್ಯಾಪಾರವನ್ನು ನಡೆಸುತ್ತಿರುವ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ, ಹೋಟೆಲ್ಗಳಲ್ಲಿ ಕೆಲಸ ಮಾಡುವ…
*7 ತಿಂಗಳ ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಂದ ತಂದೆ* *ಪೊಲೀಸರೇ ಶಾಕ್!*
*7 ತಿಂಗಳ ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಂದ ತಂದೆ* *ಪೊಲೀಸರೇ ಶಾಕ್!* ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್ ಆರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಪಾಟೀಲ್ ಮೇಲೆ ಅವರ ತಂದೆ ಪ್ರಕಾಶ್, ವೀರಣ್ಣ ಮತ್ತು ಅರುಣ್ ಎಂಬುವವರು ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಮಾನ್ಯ ಸಾವನ್ನಪ್ಪಿದ್ದಾರೆ. ಸಂಜೆ ಸುಮಾರು 6 ರಿಂದ 6.30ರ…


