ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಯನೂರು ಮಂಜುನಾಥ್ ಅವರಿಗೆ ನಾಳೆ ಹುಟ್ಟು ಹಬ್ಬ ಸಂಭ್ರಮ ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ, ಅರ್ಥಪೂರ್ಣ ಆಚರಣೆ
ಆಯನೂರು ಮಂಜುನಾಥ್ ಅವರಿಗೆ ನಾಳೆ ಹುಟ್ಟು ಹಬ್ಬ ಸಂಭ್ರಮ ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ, ಅರ್ಥಪೂರ್ಣ ಆಚರಣೆ ಶಿವಮೊಗ್ಗ : ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನ.14 ರಂದು ನಾಳೆ ನಗರದಲ್ಲಿ ಆಯನೂರು ಮಂಜುನಾಥ್ ಅವರ ಅಭಿಮಾನಿ ಬಳಗದಿಂದ ವಿವಿಧ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯನೂರು ಮಂಜುನಾಥ್ ಅವರ ಅಭಿಮಾನಿ ಬಳಗದ ಸಂಚಾಲಕ ಹಾಗೂ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ…
ಶಿವಮೊಗ್ಗ ರೌಂಡ್ ಟೇಬಲ್ ವತಿಯಿಂದ ಸರ್ಜಿ ಫೌಂಡೇಶನ್ ಗೆ ಆಂಬ್ಯುಲೆನ್ಸ್ ಕೊಡುಗೆ
ಶಿವಮೊಗ್ಗ ರೌಂಡ್ ಟೇಬಲ್ ವತಿಯಿಂದ ಸರ್ಜಿ ಫೌಂಡೇಶನ್ ಗೆ ಆಂಬ್ಯುಲೆನ್ಸ್ ಕೊಡುಗೆ ಶಿವಮೊಗ್ಗ : ಆರೋಗ್ಯ, ಶಿಕ್ಷಣ ಮತ್ತು ಸಮುದಾಯದ ಸೇವೆಗೆ ಒತ್ತು ನೀಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ರೌಂಡ್ ಟೇಬಲ್ ಇಂಡಿಯಾ ನವೆಂಬರ್ ತಿಂಗಳ 9 ರಿಂದ 15ರವರೆಗೆ ದೇಶದಾದ್ಯಂತ ಆರ್.ಟಿ.ಐ ಸಪ್ತಾಹ ವನ್ನು ಆಯೋಜಿಸಿದ್ದು, ಇದರ ಭಾಗವಾಗಿ ಶಿವಮೊಗ್ಗ ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗದಲ್ಲಿಯೂ ಪರಿಸರ ಜಾಗೃತಿ, ರಕ್ತದಾನ ಶಿಬಿರ, ಶಿಕ್ಷಣ ಜಾಗೃತಿಯಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರ್.ಟಿ.ಐ ಸಪ್ತಾಹದ ಅಂಗವಾಗಿ ಗುರುವಾರ ನಗರದ…
ಶಿವಮೊಗ್ಗ ನೆಹರೂ ರಸ್ತೆ ವರ್ತಕರೊಂದಿಗೆ ಪೊಲೀಸ್- ಪಾಲಿಕೆ ಸಭೆ* *11 ಸಲಹೆ- ಸೂಚನೆ ಪಾಲಿಸದಿದ್ದರೆ ಬೀಳಲಿದೆ ಕೇಸು* *ಸಂಚಾರ ಯೋಗ್ಯವಾಗಲಿದೆ ನೆಹರೂ ರಸ್ತೆ* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*
*ಶಿವಮೊಗ್ಗ ನೆಹರೂ ರಸ್ತೆ ವರ್ತಕರೊಂದಿಗೆ ಪೊಲೀಸ್- ಪಾಲಿಕೆ ಸಭೆ* *11 ಸಲಹೆ- ಸೂಚನೆ ಪಾಲಿಸದಿದ್ದರೆ ಬೀಳಲಿದೆ ಕೇಸು* *ಸಂಚಾರ ಯೋಗ್ಯವಾಗಲಿದೆ ನೆಹರೂ ರಸ್ತೆ* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?* ಶಿವಮೊಗ್ಗ ನಗರದ ಶುಭಂ ಹೋಟೆಲ್ ಹಾಲ್ ನಲ್ಲಿ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ.ರವರ ನೇತೃತ್ವದಲ್ಲಿ, *ನೆಹರೂ ರಸ್ತೆ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ನೆಹರು ರಸ್ತೆಯ ವರ್ತಕರ* ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಹಾಜರಿದ್ದವರ ಕುರಿತು ಎಸ್ ಪಿ ಮಿಥುನ್ ಕುಮಾರ್ ಮಾತನಾಡಿ ಸೂಚನೆಗಳನ್ನು…
ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಗೆ ಶಾಶ್ವತ ಪರಿಹಾರ ಒದಗಿಸಿ; ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯ
ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಗೆ ಶಾಶ್ವತ ಪರಿಹಾರ ಒದಗಿಸಿ; ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯ ಶಿವಮೊಗ್ಗ ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಇಂದು ಬೆಳಗ್ಗೆ 11:30ಕ್ಕೆ ಕಛೇರಿ ಅನ್ನುವುದು ಒಂದು ಜಾತ್ರಾಸ್ಥಳವಾಗಿತ್ತು. ಜನರು ಓಡಾಡುವುದು ಕಷ್ಟಕರವಾಗಿತ್ತು ಒಂದು ಭಾಗ ಓಡಾಡಿದರೆ ಇನ್ನೊಂದು ಭಾಗ ಬಂದರೆ ಮತ್ಯಾರು ಓಡಾಡಲು ಆಗುವುದಿಲ್ಲ. ಕ್ರಯ ವಿಕ್ರಯದಾರರು ಅಲ್ಲೇ ನೊಂದಣಿಗೆ ಫೋಟೋ ನೀಡಬೇಕು. ಅದಕ್ಕೂ ವಿಶಾಲವಾದ ಸ್ಥಳವಿಲ್ಲ. ಮಹಿಳೆಯರು ಹಿರಿಯರು ಅನ್ನದೆ ತಲ್ಲಾಡಿಕೊಂಡು ಓಡಾಡುವಂತಗಿದೆ. ನೂಕುನುಗ್ಗಲಿನಲ್ಲಿ ಉಸಿರು ಕಟ್ಟಿ ಸಾಯುವ ಸ್ಥಿತಿ ಅಲ್ಲಿ…
*ತಿಥಿ ಸಿನೆಮಾದ ಗಡ್ಡಪ್ಪ ನಿಧನ*
*ತಿಥಿ ಸಿನೆಮಾದ ಗಡ್ಡಪ್ಪ ನಿಧನ* 10 ವರ್ಷಗಳ ಹಿಂದೆ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ ಸಿನಿಮಾ ಎಂದರೆ ಅದು ‘ತಿಥಿ’. 2015ರಲ್ಲಿ ತೆರೆಗೆ ಬಂದ ಈ ಚಿತ್ರ ಮೆಚ್ಚುಗೆ ಪಡೆಯಿತು. ಹಲವು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತು. ಈ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿದ್ದ ಚನ್ನೇಗೌಡ ಅವರು ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ‘ತಿಥಿ’ ಸಿನಿಮಾದಲ್ಲಿ ಅವರು ಮಾಡಿದ್ದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಗಡ್ಡಪ್ಪ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು…
ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ 15000 ಸಹಿ ಸಂಗ್ರಹ…
ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ 15000 ಸಹಿ ಸಂಗ್ರಹ… ಶಿವಮೊಗ್ಗ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಇಡೀ ದೇಶದೆಲ್ಲೆಡೆ ಮತಗಳ್ಳನ ಕುರಿತಾದ “ವೋಟ್ ಚೋರ್ ಗದ್ದಿ ಚೋಡ್” ಮತ ಸಂಗ್ರಹಣೆ ಅಭಿಯಾನ ಆರಂಭಿಸಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಈಗಾಗಲೇ ಒಂದು ಹಂತದ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದು, ಇನ್ನೂ ಸಹ ಜಿಲ್ಲೆಯಲ್ಲಿ ಸಹಿ ಸಂಗ್ರಹ ಕಾರ್ಯ ಮುಂದುವರೆದಿದ್ದು,…
ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆ-ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್
ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆ-ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ ಶಿವಮೊಗ್ಗ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆಯನ್ನು ಜಾರಿಗೊಳಿಸುವುದು ಹಾಗೂ ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರು ಆದೇಶಿಸಿರುತ್ತಾರೆ. ನಗರದ ಪ್ರಮುಖ ರಸ್ತೆಗಳಾದ ಬಿಹೆಚ್ ರಸ್ತೆ(ರಾಯಲ್ ಆರ್ಕಿಡ್ ಯಿಂದ ಕರ್ನಾಟಕ ಸಂಘ ಸಿಗ್ನಲ್‌ವರೆಗೆ) ಶಿವಪ್ಪನಾಯಕ ಪ್ರತಿಮೆಯಿಂದ ಗಾಂಧಿ ಬಜಾರ್ ನಾಲ್ಕನೇ ಅಡ್ಡರಸ್ತೆವರೆಗೆ, ಗೋಪಿ ವೃತ್ತದಿಂದ ಅಮೀರ್ ಅಹ್ಮದ್ ವೃತ್ತದವರೆಗೆ, ಹಳೇ…
*ಶಿವಮೊಗ್ಗ ನಗರದೊಳಗೆ ಭಾರೀ ವಾಹನಗಳ ಸಂಚಾರ ನಿಷೇಧ: ಡಿಸಿ ಗುರುದತ್ತ ಹೆಗಡೆ ಆದೇಶ*
*ಶಿವಮೊಗ್ಗ ನಗರದೊಳಗೆ ಭಾರೀ ವಾಹನಗಳ ಸಂಚಾರ ನಿಷೇಧ: ಡಿಸಿ ಗುರುದತ್ತ ಹೆಗಡೆ ಆದೇಶ* ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ 1998 ಕಲಂ 115 ರ ಅನ್ವಯ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989 ರ ನಿಯಮ 221(ಎ)(5) ರನ್ವಯ ಶಿವಮೊಗ್ಗ ನಗರ ಗೋಪಿ ಸರ್ಕಲ್‌ನಿಂದ ಜೆಪಿಎನ್ ರಸ್ತೆ, ಜ್ಯುವೆಲ್ ರಾಕ್ ಹೊಟೇಲ್ ರಸ್ತೆ ಮಾರ್ಗವಾಗಿ ಕುವೆಂಪು ರಸ್ತೆ ಮತ್ತು ಜೈಲ್ ರಸ್ತೆ ಮೂಲಕ ಲಕ್ಷ್ಮಿ ಟಾಕೀಸ್…
*ಎಲ್ ಐ ಸಿ ಏಜೆಂಟ್ ಗಿರೀಶ್ ಮಕ್ಕಳ ಜಾತಿ ಪ್ರಮಾಣ ಪತ್ರ ರದ್ದು ಆದೇಶ* *ತಹಶೀಲ್ದಾರ್ ರಿಂದ ರದ್ದು ಆದೇಶ*
*ಎಲ್ ಐ ಸಿ ಏಜೆಂಟ್ ಗಿರೀಶ್ ಮಕ್ಕಳ ಜಾತಿ ಪ್ರಮಾಣ ಪತ್ರ ರದ್ದು ಆದೇಶ* *ತಹಶೀಲ್ದಾರ್ ರಿಂದ ರದ್ದು ಆದೇಶ* ಶಿವಮೊಗ್ಗ ತಾಲೂಕು ಕೋಟೆ ರಸ್ತೆಯ ಗಿರೀಶ ಎಂ.ಆರ್. ಎಲ್.ಐ.ಸಿ ಏಜೆಂಟ್ ಎಂಬುವವರ ಮಕ್ಕಳು ಕು.ಅಭಿಷೇಕ್ ಎಂ.ಜಿ. (ಆರ್.ಡಿ.ನಂ.0039017165807) ಮತ್ತು ಕು. ಮಾಧುರ್ಯ ಎಂ.ಜಿ. (ಆರ್.ಡಿ.ನಂ.0039017031829) ಎಂಬುವವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕೆ.ಓ. ಪಾಲಯ್ಯ ಅದೇಶ ನೀಡಿದ್ದಾರೆ.


